ಯಾದಗಿರಿ : ನೀಟ್- ಯುಜಿ 2025 ಪರೀಕ್ಷೆಗಳು 2025ರ ಮೇ 4ರ ಭಾನುವಾರ ರಂದು ನಡೆಸಲಾಗುವ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಪರೀಕ್ಷೆಯ ಎಲ್ಲಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳು : ಜವಾಹರ ಪ್ರೌಢ ಶಾಲೆ ಗ್ರಾಮೀಣ ಪೊಲೀಸ್ ಠಾಣೆ ಎದುರುಗಡೆ ಯಾದಗಿರಿ, ಜವಾಹರ ಪದವಿ ಪೂರ್ವ ಕಾಲೇಜು ಗ್ರಾಮೀಣ ಪೊಲೀಸ್ ಠಾಣೆ ಎದುರುಗಡೆ ಯಾದಗಿರಿ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಪ್ನಗ್ರೌಂಡ ಹತ್ತಿರ ಹತ್ತಿಕುಣಿ ರೋಡ್ ಯಾದಗಿರಿ, ಸರಕಾರಿ ಪದವಿ ಕಾಲೇಜು ಚಿತ್ತಾಪೂರ ರೋಡ್ ಯಾದಗಿರಿ, ಪರೀಕ್ಷಾ ಕೇಂದ್ರ ನೋಡಲ್ ಅಧಿಕಾರಿ ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಎಸ್.ಎಸ್.ಚನ್ನಬಸಪ್ಪ ಮೊ.ನಂ.9901188337 ಇವರನ್ನು ನೇಮಿಸಿದೆ.
ಪರೀಕ್ಷಾ ಕೇಂದ್ರಗಳು : ಸರಕಾರಿ ಪದವಿ ಪೂರ್ವ ಕಾಲೇಜು ಸಪ್ನಗ್ರೌಂಡ ಹತ್ತಿರ ಹತ್ತಿಕುಣಿ ರೋಡ್ ಯಾದಗಿರಿ, ಸರಕಾರಿ ಮಹಿಳಾ ಪದವಿ ಕಾಲೇಜು ಚಿತ್ತಾಪೂರ ರೋಡ್ ಯಾದಗಿರಿ, ನ್ಯೂ ಕನ್ನಡ ಪ್ರೌಢ ಶಾಲೆ (ಲಿಂಗೇರಿ ಕೋಣಪ್ಪ ಮೇಮೊರಿಯಲ್ ಹೈಸ್ಕೂಲ್) ಸಪ್ನಗ್ರೌಂಡ ಹತ್ತಿರ ಹತ್ತಿಕುಣಿ ರೋಡ್ ಯಾದಗಿರಿ, ಯಾದಗಿರಿ ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಮೊ.ನಂ.8431057317 ಇವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
