ಪರಿಶಿಷ್ಟ ಜಾತಿ ಒಳಮೀಸಲಾತಿ ಸಮಗ್ರ ಸಮೀಕ್ಷೆ

ಯಾದಗಿರಿ : ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ, ಮೂಲ ಜಾತಿ ಸಮಗ್ರ ಸಮೀಕ್ಷೆ-2025ರ ಪರಿಶಿಷ್ಟ ಜಾತಿ ಒಳಮೀಸಲಾತಿ ಮೇ 15ರ ಸರ್ವೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ  ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಒಳ ಮೀಸಲಾತಿ ಸರ್ವೆ 2025ರ ಮೇ 5 ರಿಂದ 17ರ ವರೆಗೆ ನಡೆಯಲ್ಲಿದೆ ಒಟ್ಟು 6 ತಾಲ್ಲೂಕುಗಳು 4 ವಿಧಾನಸಭಾ ಕ್ಷೇತ್ರಗಳು ಇರುತ್ತದೆ. ಒಟ್ಟು ಜಿಲ್ಲೆಯ ಗಣತಿದಾರರ ಸಂಖ್ಯೆ 1134 ಮತಗಟ್ಟೆವಾರು ಸಮೀಕ್ಷೆ ಮಾಡಲಾಗುವುದು.

ಯಾದಗಿರಿ ವಿಧಾನಸಭಾ ಕ್ಷೇತ್ರ 268, ಶಹಾಪೂರ ವಿಧಾನಸಭಾ ಕ್ಷೇತ್ರ 265, ಗುರುಮಠಕಲ್ ವಿಧಾನಸಭಾ ಕ್ಷೇತ್ರ 284, ಸುರಪುರ ವಿಧಾನಸಭಾ ಕ್ಷೇತ್ರ 317, ಪ್ರತಿ 1 ರಿಂದ 12 ಮತಗಟ್ಟೆಗಳಿಗೆ ಒಬ್ಬರನ್ನು ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಪ್ರತಿ ವಿಧಾನಸಭಾವಾರು ಸಹಾಯಕ ಆಯುಕ್ತರು ಹುದ್ದೆಯ ಸಮಾನ ದರ್ಜೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ 3 ನೇಮಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಪ್ರತಿ ತಾಲ್ಲೂಕದಲ್ಲಿ 5 ರಂತೆ ನೇಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕ ಮಟ್ಟದಲ್ಲಿ ಒಳ ಮೀಸಲಾತಿ ಸಮೀಕ್ಷೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!