ಮೈಸೂರಿನಲ್ಲಿರುವ ಉದ್ಯೋಗ ಖಚಿತ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶ ಆರಂಭ | ಕೇಂದ್ರ ಸರ್ಕಾರದ ಈ ಶಿಕ್ಷಣ ಪಡೆದವರಿಗೆ ಉದ್ಯೋಗಗಳಲ್ಲಿ‌ ವಿಪುಲ ಅವಕಾಶಗಳು : ಕೆ.ಇ.ಭೀಮಾಚಾರ್ಯ ಮಾಹಿತಿ

ಯಾದಗಿರಿ: ಮೈಸೂರಿನಲ್ಲಿರುವ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಸಿಪೆಟ್ ) ಸಂಸ್ಥೆಯಲ್ಲಿನ ಉದ್ಯೋಗ ಭರವಸೆಯ ಪಾಲಿಮರ್, ಪ್ಲಾಸ್ಟಿಕ್ ಡಿಪ್ಲೋಮಾ ಕೋರ್ಸ್ ಗಳಿಗಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ, ಐಟಿಐ ಪಾಸಾದ ವಿದ್ಯಾರ್ಥಿಗಳಗೆ ಪ್ರವೇಶ ಆರಂಭವಾಗಿದ್ದು ಈ ಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆಯೇ ಸಂಸ್ಥೆಯ ಸಹಾಯಕ ತಾಂತ್ರಿಕ ಅಧಿಕಾರಿ ಕೆ.ಇ. ಭೀಮಾಚಾರ್ಯ ಮನವಿ ಮಾಡಿದ್ದಾರೆ.

ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕೇಂದ್ರ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿ ಎಸ್ ಎಸ್ ಎಲ್ ಸಿ ಪಾಸಾದವರಿಗೆ ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಎಂಬ ಎರಡು ಕೋರ್ಸ್ ಗಳು ಇದ್ದು ಆಸ್ತಕ ವಿದ್ಯಾರ್ಥಿಗಳು ಒಂದನ್ನು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಬಹುದು ಎಂದರು.

ಕರ್ನಾಟಕದವರಿಗೆ ಮೊದಲ ಆದ್ಯತೆ ಇದ್ದು, ಪ್ರತಿ ಸೆಮಿಸ್ಟರ್ ಗೆ ಸುಮಾರು 20 ಸಾವಿರ ರೂ. ಖರ್ಚು ಬರುತ್ತದೆ ಎಂದು ತಿಳಿಸಿದ್ದಾರೆ. ಇಲ್ಲಿ ಭಾರತದ ಕೈಗಾರಿಕಾ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಬೆಳವಣಿಗೆಗೆ ಅನುಗುಣವಾಗಿ ಶೈಕ್ಷಣಿಕ ತರಬೇರಿ ನೀಡಲಾಗುತ್ತದೆ ಎಂದರು.

ಪ್ಲಾಸ್ಟಿಕ್ ವೈವಿದ್ಯಮಯ ಬಳಕೆ, ಮೌಲ್ಡಿಂಗ್, ಸಂಸ್ಕರಣೆ, ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ವಸ್ತುಗಳ ತಯಾರಿಕೆ, ಮರುಬಳಕೆ ವಿಧಾನ, ಪೈಪ್ ಗಳು ಮತ್ತು ಇತರೆ ವಸ್ತುಗಳ ತಯಾರಿಕೆ ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ ಕುರಿತು ಕಲಿಸಲಾಗುತ್ತದೆ ಎಂದು ಅವರು ಹೇಳಿದರು.

ಉದ್ಯೋಗಾವಕಾಶಗಳು : ಆಟೋಮೊಬೈಲ್ ಕೈಗಾರಿಕೆಗಳು, ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು ಮತ್ತು ಪಿವಿಸಿ ಪೈಪ್ ತಯಾರಿಕಾ ಕಂಪನಿಗಳು ಮತ್ತು ವಿದ್ಯುನ್ಮಾನ್ , ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪನಿಗಳಲ್ಲಿ, ಆಹಾರೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರ, ಅಗ್ರೋ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ ಕ್ಷೇತ್ರ, ಎಲೆಕ್ಟ್ರಿಕಲ್ಸ್ , ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಉದ್ಯೋಗಗಳಿಗೆ ಅವಕಾಶವಿದೆ ಎಂದು ಭೀಮಾಚಾರ್ಯಿ ಹೇಳಿದರು.

ಹಲವು ಸೌಲಭ್ಯ : ಸ್ಟೈಫಂಡ್ ನೊಂದಿಗೆ ಆರು ತಿಂಗಳ ಇನ್ ಪ್ಲಾಂಟ್ ತರಬೇತಿ, ಅತ್ಯುತ್ತಮ ಉದ್ಯೋಗ ದಾಖಲೆ ಮತ್ತು ಉದ್ಯಮದಲ್ಲಿ ಪರಿಣತಿ ಹೊಂದಿರುವ ಅಧ್ಯಾಪಕರು ಮತ್ತು ಶಿಕ್ಷಣ ಸಾಲ ಮತ್ತು ವಿದ್ಯಾರ್ಥಿ ವೇತನಕ್ಕೆ ಸಹಾಯ ಹೀಗೆ ಸೌಲಭ್ಯಗಳಿವೆ ವಿವಿಧ ಹೆಚ್ಚುವರಿ ಪಠ್ಯಕ್ರಮಗಳು ಸಹ ಇಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!