ಚಪೆಟ್ಲಾ ಗ್ರಾ.ಪಂ. ಕಮಲನಗರ ತಾಂಡ ಜನರಿಂದ ಗ್ರಾಪಂ‌ಗೆ ಮುತ್ತಿಗೆ | ಜನರ ಸಮಸ್ಯೆಗೆ ಸ್ಪಂದಿಸಲು ಕರ್ನಾಟಕ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಪವಾರ್ ಒತ್ತಾಯ

ಗುರುಮಠಕಲ್: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಗ್ರಾಂ ಪಂ. ಕಾರ್ಯವೈಖರಿಯಿಂದ ಬೇಸತ್ತು ತಾಂಡ ಜನರು ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಸುಮಾರು ದಿನಗಳಿಂದ ನೀರು ಬರುತ್ತಿಲ್ಲ. ಈ ಹಿಂದಿನ ವಾಟರ್ ಮ್ಯಾನ್ ಕಾರ್ಯ ನಿರ್ವಹಿಸಲು ಆಗಲ್ಲ ಎಂದಿದ್ದರಿಂದ ತೆಗೆಯಲಾಗಿದೆ. ಆ ಸ್ಥಳಕ್ಕೆ ಹಣಮಂತ ಎನ್ನುವ ವಾಟರ್ ಮ್ಯಾನ್ ನೇಮಕವಾದಾಗಿನಿಂದ ಸಮಸ್ಯೆ ಇರಲಿಲ್ಲ, ಹೊಸ ಪಿಡಿಓ ಕೆಲಸಕ್ಕೆ ಬೇಡ ಎಂದಿದ್ದಕ್ಕೆ ವಾಟರ್ ಮ್ಯಾನ್ ಕೆಲಸ ನಿಲ್ಲಿಸಿ, ನೀರು ಬಿಡದ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಸಮಸ್ಯೆ ಬಗೆಹರಿಸಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಸಮಸ್ಯೆ ಪರಿಹಾರದ ಬಗ್ಗೆ ಪಿಡಿಓ ಅವರಿಗೆ ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಪವಾರ್ ಹೇಳಿದ್ದಾರೆ.

ತಕ್ಷಣವೇ ಸಮಸ್ಯೆ ಬಗೆಹರಿಸಲು ಸದಸ್ಯ ಮೋಹನ್ ಅವರು ಸಮಸ್ಯೆ ಆಲಿಸಲು ಆಗಮಿಸಿದ ತಾ.ಪಂ. ಅಧಿಕಾರಿ ಶರಣಪ್ಪ ಮೈಲಾರಿ ಅವರ ಗಮನಕ್ಕೆ ತಂದರು. ಸೋಮವಾರ ತಾಂಡಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ವೆಂಕಟೇಶ, ಗೋವಿಂದ, ಶರಣು, ಚತ್ರ್ಯಾ, ಗೋವಿಂದ, ಶಾಂತಿ ಬಾಯಿ, ಧಾನಿಬಾಯಿ, ಲೀಲಿ ಬಾಯಿ, ಅಂಬ್ರಿ ಬಾಯಿ, ಪೀಪಳಿಬಾಯಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!