7 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ | ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ | ನೀರು, ಚರಂಡಿ ವ್ಯವಸ್ಥೆ ಪರಿಶೀಲನೆಗೆ ಸೂಚನೆ
ಗುರುಮಠಕಲ್: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶರಣಬಸಪ್ಪಗೌಡ ದರ್ಶನಾಪೂರ ಅವರು ಪಕ್ಷ ಮರೆತು ಅಭಿವೃದ್ಧಿ ಅನುದಾನ ಹಂಚಿಕೆ ಮಾಡಿದ್ದಾರೆ. ದರ್ಶನಾಪೂರ ಅವರು ಮತ್ತೊಮ್ಮೆ ಮಂತ್ರಿಯಾಗಲಿ ಎಂದು ಶಾಸಕ ಶರಣಗೌಡ ಕಂದಕೂರ ಇಂಗಿತ ವ್ಯಕ್ತಪಡಿಸಿದ್ದಾರೆ.
ಮ್ಯಾಕ್ರೋ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು ಅಭಿವೃದ್ಧಿ ವಿಷಯದಲ್ಲಿ ಪಕ್ಷ ಮರೆತು ಸಹಕಾರ ನೀಡಿದ್ದಾರೆ. 7 ಕೋಟಿ ಅನುದಾನವನ್ನು. ಕ್ಷೇತದ ಅಭಿವೃದ್ಧಿಗೆ ದರ್ಶನಾಪೂರ ಅವರು ಹಂಚಿಕೆ ಮಾಡಿದ್ದಕ್ಕೆ ಅಭಿನಂದಿಸಿದರು.
ತಾಲೂಕಿನ ಚಂಡರಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 25-26ನೇ ಸಾಲಿನ ಕೆಕೆಆರ್ ಡಿಬಿ ಮ್ಯಾಕ್ರೋ ಸಾಮಾನ್ಯ ಯೋಜನೆಯಡಿ ಖಾಸಾಮಠ ಕಾಸ್ ನಿಂದ ಪುಟಪಾಕ್ ಮುಖ್ಯರಸ್ತೆ ವರೆಗೆ ಚಂಡರಕಿ ಮಾರ್ಗವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗಡಿ ಭಾಗದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಒದಗಿಸಲು 7 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಅಭಿವೃದ್ಧಿ ವಿಷಯದಲ್ಲಿ ಪಕ್ಷ ಬಿಟ್ಟು ಸ್ಥಳೀಯರು ಸಹಕಾರ ನೀಡುವುದು ಮುಖ್ಯವಾಗಿದೆ. ಅಂಬೇಡ್ಕರ್ ನಗರ ಮೂಲಸೌಕರ್ಯಕ್ಕೆ 15 ಲಕ್ಷದ ಕಾಮಗಾರಿ ಮಂಜೂರಾಗಿದೆ. ಇನ್ನು ಹಳ್ಳ ಕ್ಕೆ 25 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲು ಸೂಚನೆ ನೀಡಿದರು.
ಕೆಲ ವಾರ್ಡ್‌ಗೆ ನೀರಿನ ಸಮಸ್ಯೆಯಾಗಿದ್ದು, 1 ಕಿ.ಮೀ. ಪೈಪ್ ಲೈನ್ ಮಾಡಲು ಪ್ರಸ್ತಾವನೆ ಸಲ್ಲಿಸಿ ಶಾಸಕರ ಅನುದಾನದಲ್ಲಿ ಕಾಮಗಾರಿಗೆ ಅನುದಾನ ದಾನ ನೀಡಲಾಗುವುದು ಎಂದು ಭರವಸ್ಥೆ ನೀಡಿದರು. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು. ನೀರಿನ ವ್ಯವಸ್ಥೆ ಸ್ಥಳ ಪರಿಶೀಲನೆ ಮಾಡಿ ಪರಿಹಾರಕ್ಕೆ ತಾ.ಪಂ.ಅಧಿಕಾರಿ ಅಂಬೇಷ ಪಾಟೀಲ್ ಅವರಿಗೆ ಸೂಚನೆ ನೀಡಿದರು. ಪ್ರತಿಯೊಂದು ಸಮಸ್ಯೆ ಸಾರ್ವಜನಿಕರು ಶಾಸಕರ ಬಳಿಯೇ ಹೇಳುತ್ತಾರೆ, ಆದರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಅಮಸಾಧಾನ ವ್ಯಕ್ತಪಡಿಸಿದರು.
ಹೆಚ್‌ಡಿಕೆ ಸಿಎಂ ಆಗಿದ್ದಾಗಿನ ವಾಸ್ತವ್ಯ ನೆನಪಿಸಿದ ಶಾಸಕರು: ಸುಮಾರು 50 ವರ್ಷಗಳಿಂದ ರಾಜಕೀಯ ಮಾಡಿದವರು ಈ ಭಾಗದ ಜನರ ಸಮಸ್ಯೆ ಕೇಳಿಲ್ಲ. ಹಾಗಾಗಿ ಹೆಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಾಸ್ತವ್ಯ ಮಾಡಿಸಿದ್ದು, ಇದನ್ನು ಅಧಿಕಾರಿಗಳು ಅರಿಯಬೇಕು ಎಂದರು. ಬೇರೆಯವರಂತೆ ಪೋಲಿಸ್ ರನ್ನು ಕರೆದುಕೊಂಡು ಬಂದು ಗಾಡಿ ಹತ್ತಿ ಹೋಗಲ್ಲ. ಇಲ್ಲಿ ಕುಳಿತು ಸಮಸ್ಯೆ ಕೇಳುವವರು ಯಾರೂ ಇರಲಿಲ್ಲ. ಈಗ ಬಂದು ಕೇಳಿ ಬಗೆಹರಿಸುವವರಿದ್ದಾರೆ ಶಾಂತವಾಗಿ ಇರಿ ಎಂದು ಸಮಾಧಾನದಿಂದ ಜನರ ಸಮಸ್ಯೆ ಆಲಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಪರಶುರಾಮ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್, ಪ್ರಮುಖರಾದ ಶರಣು ಆವುಂಟಿ, ಪ್ರಕಾಶ ನೀರೆಟಿ, ಬಸವರಾಜ ದಳಪತಿ, ಬಸ್ಸಣ್ಣ ದೇವರಹಳ್ಳಿ, ರವಿ ಗವಿನೋಳ, ಮಲ್ಲಿಕಾರ್ಜುನ ಅರುಣಿ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
