ಗಡ್ಡೆಸುಗೂರ ನಲ್ಲಿ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ | ಮಾರ್ಗ ಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ
ವಡಗೇರಾ : ತಾಲೂಕಿನ ಗಡ್ಡೆಸುಗೂರ ಗ್ರಾಮದ 30 ವರ್ಷದ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿ 108 ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಬುಧವಾರ ರಾತ್ರಿ 1:30ರ ಸುಮಾರಿಗೆ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವ ಕಾಪಾಡಿದ್ದಾರೆ.
ರಾತ್ರಿ ವಡಗೇರಾದಿಂದ ಆಗಮಿಸಿದ ಆಂಬುಲೆನ್ಸ್ ಗಡ್ಡೆಸುಗೂರದಿಂದ ಯಾದಗಿರಿ ಜಿಲ್ಲಾಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿದೆ, ಹಾಗಾಗಿ ಸ್ಟಾಪ್ ನರ್ಸ್ ಭೀಮಾಶಂಕರ್ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.
ತಾಯಿ ಮಗು ಆರೋಗ್ಯವಾಗಿ ಸುರಕ್ಷಿತವಾಗಿ ಇದ್ದು ಡ್ರೈವರ್ ಅನ್ವರ್ ಪಾಷ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಹೆರಿಗೆ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
