ಹತ್ತಾರು ಅಂಗಡಿಗಳು, ಅದರೆದುರು ವಸ್ತು, ತಿನಿಸುಗಳನ್ನು ಕೊಳ್ಳಲು ನಾಮುಂದು, ತಾ ಮುಂದು ಎನ್ನುತ್ತ ಮುಗಿಬಿದ್ದು ಗ್ರಾಹಕರು, ಇದು ಯಾವುದೋ ಮಾರುಕಟ್ಟೆಯ ಚಿತ್ರಣವಲ್ಲ. ಶಹಾಪೂರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗವು ಹಮ್ಮಿಕೊಂಡ ಅಣುಕು ಮಾರುಕಟ್ಟೆಯ ದೃಶ್ಯ.

ಹೌದು, ಶಹಾಪೂರ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲರಾದ ಅಯ್ಯಣ್ಣ ಇನಾಂದಾರ್, ಬಾಲಕಿಯರ ಪದವಿ ಪೂರ್ವ ಕಾಲೇಜಿನ ವೈ.ಹೆಚ್. ವಜ್ಜಲ್, ಭೀಮರಾಯನಗುಡಿ ಕಾಲೇಜಿನ ದೇವಿಂದ್ರಪ್ಪ ಮಡಿವಾಳ್ಕರ್ ಹಾಗೂ ಡಾ. ಅಮೀತ ಮಾಶಿಮಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಜ್ಜಲ್ ಅವರು ಮಾತನಾಡಿ, ‘ತರಗತಿಯ ಪಠ್ಯಗಳು ಸೈದ್ದಾಂತಿಕ ಜ್ಞಾನವನ್ನು ನೀಡಿದರೆ, ಇಂತಹ ಪ್ರಾಯೋಗಿಕ ತರಗತಿಗಳು ಅನುಭವವನ್ನು ನೀಡುತ್ತವೆ. ಅನುಭವದಿಂದಾಗುವ ಕಲಿಕೆ ನೈಜವಾದುದು’ ಇಂತಹ ಕಲಿಕೆಯ ಮೂಲಕ ನೀವು ಉದ್ಯಮಿಗಳಾಗಬೇಕೆಂದು ಹೇಳಿದರು’. ಈ ಸಂದರ್ಭದಲ್ಲಿ ಇನಾಂದಾರ್ ಮತ್ತು ಮಡಿವಾಳರ್ ಮಾತನಾಡಿದ ಪದವಿ ಕಾಲೇಜೊಂದರಲ್ಲಿನ ಹಮ್ಮಿಕೊಂಡ ಅತ್ಯಂತ ಉಪಯುಕ್ತ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾದಂತಾಯಿತು ಎಂದರು.

ವಿಭಾಗದ‌ ಮುಖ್ಯಸ್ಥರಾದ ಡಾ. ಶಂಕ್ರಮ್ಮ ಪಾಟೀಲ್ ಪ್ರಾಸ್ತಾವಿಕ‌‌ ಮಾತನಾಡಿ, ಈ ರೀತಿಯ ಪ್ರಾಯೋಗಿಕ ಕಲಿಕೆ ಅತ್ಯವಶ್ಯ. ಪ್ರಾಯೋಗಿಕವಾಗಿ ಕಲಿತದ್ದನ್ನು ವಿದ್ಯಾರ್ಥಿಗಳು ಅತಿ ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ವೃತ್ತಿಯಲ್ಲಿ ಅವಶ್ಯಕತೆ ಬಂದಾಗ ಅಳವಡಿಕೊಳ್ಳುತ್ತಾರೆ. ಮಾರುಕಟ್ಟೆ. ನಿರ್ವಹಣೆ, ವಸ್ತುಗಳ ಬೆಲೆ ನಿಗದೀಕರಣ, ಹೂಡಿಕೆಯ ಮಹತ್ವ, ಗ್ರಾಹಕರನ್ನು ಮನವೊಲಿಸುವುದು, ದಾಸ್ತಾನು ನಿರ್ವಹಣೆ, ಆಕರ್ಷಿಸುವ ಬಗೆ , ಬೇಡಿಕೆಯ ನಿರ್ವಹಣೆ ಹೀಗೆ ನಿರ್ವಹಣೆಯ ಹಲವು ವಿಷಯಗಳ ಪರಿಕಲ್ಪನೆಯಗಳನ್ನು ತಿಂಗಳುಗಟ್ಟಲೇ ಪಾಠದ ಮೂಲಕ ಕಲಿಸಿದ್ದನ್ನು ಪ್ರಾಯೋಗಿಕವಾಗಿ ಒಂದು ದಿನದಲ್ಲಿ ಹೆಚ್ಚು ಅರ್ಥೈಸಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿದ್ದಪ್ಪ ಬಿ.ದಿಗ್ಗಿ ವಹಿಸಿದ್ದರು. ಬಿಬಿಎ ವಿದ್ಯಾರ್ಥಿಗಳನ್ನು ತಲಾ ಐದು ವಿದ್ಯಾರ್ಥಿಗಳಂತೆ ಆರು ತಂಡಗಳಾಗಿ ರಚಿಸಿ ಸಿಹಿತಿಂಡಿ, ಸ್ನ್ಯಾಕ್ಸ್ ,ಚಹಾ- ಕಾಫಿ ಮಜ್ಜಿಗೆ , ಮನೆ ಆಹಾರ, ಮೊಳಕೆ ಕಾಳಿನ ವಿವಿಧ ವ್ಯಂಜನಗಳು, ಪಾನೀಯ, ಸ್ಟೇಷನರಿ , ಜೋಕಾಲಿ ಮತ್ತು ಮೆಹಂದಿಸೇವೆ, ಪುಸ್ತಕ ಮಾರಾಟ ಹಾಗೂ ಚಾಟ್ಸ್ ಮತ್ತು ಪಾನಿಪುರಿ ಸೇರಿದಂತೆ ಆರು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಬಿಬಿಎ ವಿದ್ಯಾರ್ಥಿಗಳೇ ಉತ್ಪನ್ನ ಆಯ್ಕೆ, ಬೆಲೆ ನಿಗದಿ, ಪ್ರಚಾರ, ಮಾರಾಟ ಹಾಗೂ ಗ್ರಾಹಕ ಸೇವೆಯನ್ನು ನಿರ್ವಹಿಸಿ ವ್ಯಾಪಾರ ಮಾಡುವ ಮೂಲಕ, ವ್ಯಾಪಾರವನ್ನು ಕಲಿಯುವ ಹಾಗೂ ಉದ್ಯಮ ನಿರ್ವಹಣೆಯ ಪ್ರಾಯೋಗಿಕ ಅನುಭವ ಪಡೆದರು.

ಶಹಾಪುರ, ಭೀಮರಾಯನಗುಡಿ ಸೇರಿದಂತೆ ಅನೇಕ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯದ ಹಾಗೂ ಮಾದರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಲೇಜಿನ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಳು ಸೇರಿದಂತೆ ಎಲ್ಲ ಪ್ರಾಧ್ಯಾಪಕರು, ಉಪನ್ಯಾಸಕರು, ಬೋದಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ವಿವಿಧ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಾಬುರಾಯ ದೊರೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ನಾಗರೆಡ್ಡಿ ಬೈರೆಡ್ಡಿ, ಗ್ರಂಥಪಾಲಕರಾದ ಡಾ. ಸಾವಿತ್ರಿ ಅವರು ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಗ್ರಂಥಾಲಯ, ಕ್ರೀಡಾ ಕೊಠಡಿ , ವಿಜ್ಞಾನ ವಿಭಾಗದ ಪ್ರಯೋಗಾಲಯಗಳು ಹಾಗೂ ವಿವಿಧ ಶೈಕ್ಷಣಿಕ ಮತ್ತು ಮೂಲಸೌಕರ್ಯಗಳನ್ನು ಪರಿಚಯಿಸಿದರು.

ಕಾರ್ಯಕ್ರಮವನ್ನು ನಿರ್ವಣಾಶಾಸ್ತ್ರ ವಿಭಾಗದ ವಿಭಾಗದ ಮುಖ್ಯಸ್ಥರಾದ ಡಾ. ಶಂಕ್ರಮ್ಮ ಪಾಟೀಲ, ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಮತ್ತು ಪ್ರೊ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ , ಡಾ. ಸುನೀಲ ಕುಮಾರ ಬೀದೆ ಡಾ. ಅಶೋಕರೆಡ್ಡಿ ಪಾಟೀಲ್, ಡಾ. ಪ್ರಶಾಂತ್ ಕುಮಾರ್, ಡಾ. ಗುರುರಾಜ ನಾಗ್ಳೀಕರ್, ಪ್ರೊ ಮಹೆಬೂಬ ಅಲಿ ಸೌದಾಗರ್ , ಪ್ರೊ ಬದರುನ್ನೀಸಾ ಬೇಗಂ, ಡಾ. ಅಮೀತ ಮಾಶಿಮಡೆ ಶೋಭಾ , ಪ್ರೊ. ಮಲ್ಲಿಕಾರ್ಜುನ್ ಮುಗಳಿ, ಪ್ರೊ ಕಾಳಮ್ಮ, ಪ್ರೊ. ಈರಮ್ಮ ಡಾ. ಮಾರುತಿಕುಮಾರ ಪ್ರೊ. ಇಮ್ರಾನ್ ಖಾಜಿ, ಡಾ. ಪ್ರಮೋದ ಕುಲಕರ್ಣೀ ಡಾ. ಮಹದೇವಪ್ಪ, ಪ್ರೊ. ನಾಗಪ್ಪ ಚವಲ್ಕರ್, ಡಾ. ಸಂತೋಷ್ ನಡಿಹಾಳ, ಡಾ. ಮೋಹನ ಕುಮಾರ ರವಿಕುಮಾರ್, ಅಶ್ವಿನಿ,ಪ್ರೊ. ಬುರಾನುದ್ದಿನ್, ಶ್ರೀಮತಿ ಭವಾನಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!