ಸಹಸ್ತ್ರಾರ್ಜುನ ಮಹಾರಾಜರ ಜಯಂತಿ | ಭವ್ಯ ಶೋಭಾಯಾತ್ರೆ | ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ | ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಣೆ

ಗುರುಮಠಕಲ್: ತ್ರೇತಾಯುಗದಲ್ಲಿ ಪರಶುರಾಮರ ಜೊತೆ ಹಲವು ಬಾರಿ ಯುದ್ಧ ಮಾಡಿದ್ದ ಸಹಸ್ತ್ರಾರ್ಜುನ ಮಹಾರಾಜರು, ನರ್ಮದಾ ನದಿ ತೀರದಲ್ಲಿ ಯುದ್ಧ ಏರ್ಪಟ್ಟ ಸಂದರ್ಭದಲ್ಲಿ ರಾವಣನನ್ನು ಬಂಧಿ ಮಾಡಿದ್ದರು ಎನ್ನುವ ಅಂಶ ಇತಿಹಾಸದಲ್ಲಿ ಉಲ್ಲೇಖವಾಗಿದೆ ಎಂದು ಎಸ್ ಎಸ್ ಕೆ ಸಮಾಜದ ಉಪಾಧ್ಯಕ್ಷ ಬುಡ್ಡಪ್ಪ ಜನಾರ್ಧನ ಹೇಳಿದರು.

ಗುರುಮಠಕಲ್ ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಸೋಮವಂ ಶ ಸಹಸ್ತ್ರಾರ್ಜುನ ಮಹಾರಾಜರ ಜಯಂತಿಯನ್ನುದ್ದೇಶಿಸಿ ಮಾತನಾಡಿ, ಕಾಮಧೇನು ಗೋವು ಖುಷಿ ಮುನಿಗಳ ಆಶ್ರಮದಲ್ಲಿ ಇದ್ದರೆ ಕೆಲವರಿಗೆ ಉಪಯುಕ್ತ, ರಾಜಾಶ್ರಮದಲ್ಲಿದ್ದರೇ ರಾಜ್ಯದ ಜನರ ಕಲ್ಯಾಣವಾಗುತ್ತದೆ  ಎಂದು ಒತ್ತಾಯಪೂರ್ವಕವಾಗಿ ತಂದಿದ್ದರು ಎಂದು ವಿವರಿಸಿದರು.ಮಹಿಳಾ ಮಂಡಲ ಅಧ್ಯಕ್ಷೆ ಶೋಭಾ ಬಾಯಿ ರಂಗಾಪೂರ ಮಾತನಾಡಿ, ಸಮಾಜದಲ್ಲಿರುವ ಮಾರಕ, ಆರ್ಥಿಕ ವೆಚ್ಚವಾಗುವ ಕೆಲವು ಪದ್ಧತಿಗಳ ಬದಲಾಯಿಸಿಕೊಳ್ಳಬೇಕಿದೆ ಎಂದರು. ಪಾಶ್ಚಾತ್ಯ ಶೈಲಿಯ ಉಡುಗೆ ತೊಡುಗೆಗಳಿಂದ ದೂರ ಇರಬೇಕು ಎಂದರು. ನಮ್ಮ ಭವ್ಯ ಸಂಸ್ಕೃತಿ ,ಸಂಸ್ಕಾರವನ್ನು ಆಚರಿಸಿ, ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತಿನಂತೆ ಸಮಾಜದ ದುಡಿಯುವ ಒಳ್ಳೆಯ  ವರನಿಗೆ ವಧುವು ನೀಡಬೇಕು ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.

ಯಶವಂತ ಚೌಧರಿ ಮಾತನಾಡಿ, ಅದ್ಧೂರಿ ಕಾರ್ಯಕ್ರಮಕ್ಕೆ ಸಹಕಾರ ಮಾಡಿ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ ಹೇಳಿದರು. ನರೇಶ ಗೊಂಗಲೆ ಮಾತನಾಡಿ, ಪ್ರಸ್ತುತ, ಭವಿಷ್ಯ ಹೇಗೆ ಎನ್ನುವ ಕಾರ್ಯ ಯೋಜನೆ, ಲಕ್ಷ್ಯ ಸಾಧಿಸಲು ಸಮಾಜ ಮುನ್ನಡೆ ಸಾಧಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು. ರಾಜಕೀಯ, ಆರ್ಥಿಕವಾಗಿಯೂ ಬಲಿಷ್ಠವಾಗಿದ್ದೇವು. ಬದಲಾದ ಸನ್ನಿವೇಶದಲ್ಲಿ ಆಧುನಿಕತೆ ಹೊಂದಾಣಿಕೆ ಮಾಡಿಕೊಂಡು ವ್ಯಾಪಾರ, ವ್ಯವಹಾರ ಮಾಡಿ ಸಧೃಡವಾಗುವ ನಿಟ್ಟಿನಲ್ಲಿ ಚಿಂತನೆ ಅಗತ್ಯವಾಗಿದೆ ಎಂದರು.ಛಟ್ಟುಲಾಲ್ ಅರಸಿದ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷ ಚಂದುಲಾಲ್ ಚೌಧರಿ ಮಾತನಾಡಿ, ಹರಿಹರ ದ ರಾಜ್ಯ ಸಮಾವೇಶ ವಿಷಯಗಳ ಕುರಿತು ಗಂಭೀರವಾಗಿ ಚಿಂತನೆ ಮಾಡಿ ಪಾಲನೆ ಮಾಡಬೇಕು. ಮಕ್ಕಳ ಮೇಲೆ ಪಾಲಕರು ಕಾಳಜಿವಹಿಸಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಸಮಾಜದ ಸರ್ಕಾರಿ ನೌಕರರ ಸಂಘದಿಂದ ಸ್ಥಾಪನೆಯಾದ ಗ್ರಂಥಾಲಯವನ್ನು ಉದ್ಘಾಟನೆ ಮಾಡಲಾಯಿತು. ಸಮಾಜದ ಗೌರವಾಧ್ಯಕ್ಷ ರಾಮಕಿಶನ್ ರಾವ್ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಲಕ್ಷ್ಮಣರಾವ್ ಚೌಧರಿ, ಯುವ ಅಧ್ಯಕ್ಷ ನಿತೀನ್ ತಗಡಘರ, ಭರತ ಜೀತ್ರಿ, ಸುಷ್ಮಾ ಚೌಧರಿ, ಶಶಿಕಾಂತ ಜನಾರ್ಧನ ವೇದಿಕೆಯಲ್ಲಿದ್ದರು. ವಸಂತ ಹಬೀಬ್, ಗೋವಿಂದ ಮೇಂಗಜಿ, ಮೋಹನ್ ಬುರಬುರೆ, ಪವನ್ ಮೇಂಗಜಿ, ಮೋಹನ್ ಚಮಕುರಾ, ವಿಜಯ್ ಬಸೂದೆ, ಅನೀಲ ಜೀತ್ರಿ, ರಾಕೇಶ್ ಚೌಧರಿ, ರಾಘವೇಂದ್ರ ಮಿಸ್ಕಿನ್, ಮನೋಹರ್ ಜೀತ್ರಿ, ತುಕಾರಾಮ ಧಡಂಗೆ, ಮಹೇಶ್ ಚೌಧರಿ, ಸುರೇಶ್ ಗೊಂಗಲೆ, ಅಶೋಕ್ ಠಾಕೂರ್, ರಜನೀಕಾಂತ್ ಮೇಂಗಜಿ ಇತರರು ಇದ್ದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಗೀತಾ ನಾಮಾಜಿ, ವಿಠ್ಠಲ ಮಿಸ್ಕಿನ್, ವಿಠ್ಠಲರಾವ ಪೂಜಾರಿ, ಚೇತನ್ ಧಡಂಗೆ, ಸುನೀಲ್ ಗೊಂಗಲೆ, ಮಾಣಿಕ್ ಪ್ರಭು ಚೌಧರಿ, ವಸಂತರಾವ ಮೇಂಗಜಿ, ನರಸಿಂಗರಾವ್ ಧಡಂಗೆ, ಅಂಬಾದಾಸ ತಗಡಘರ್, ರಾಮಕಿಶನ ರಾವ್ ತಗಡಘರ್, ಶಶಿಕಾಂತ ಜನಾರ್ಧನ, ಅನಿತಾ ವಸಂತರಾವ ಹಬೀಬ್, ಲಕ್ಷ್ಮಣರಾವ್ ಕಮಲಾ ಪೂರ, ಲಕ್ಷ್ಮಣರಾವ್ ಚೌಧರಿ ಅವರಿಗೆ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜೇಶ ಅರಸಿದ, ದಿವ್ಯಾ ತಗಡಘರ್, ದಕ್ಷ ಮಿಸ್ಕಿನ್, ಪಿಯು ಪ್ರಿಯಾಂಕ, ಅರ್ಪಿತಾ, ಖುಷಿ, ಡಿಗ್ರಿ ಅಮೃತ, ಅಂಬಿಕಾ, ವೈದ್ಯಕೀಯ ಕ್ಷೇತ್ರದ ಡಾ. ಧನ್ವಂತ, ಡಾ. ಶೀತಲ್ ಮತ್ತು ಇಂಜಿನಿಯರಿಂಗ್ ಅಜಯ್ ಹಾಗೂ ಪ್ಯಾರಾ ಮೆಡಿಕಲ್ ಚಂದ್ರಕಲಾ, ರಾಜೇಶ್ವರಿ, ನವೀನ್ , ಜತೀನ್ ಅವರಿಗೆ ಸನ್ಮಾನ ಮಾಡಲಾಯಿತು. ಅಭಯ ಕುಮಾರ್ ಹಬೀಬ್ ಅವರಿಂದ ಕೊಡಮಾಡುವ ಗಣಿತ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹ ನೀಡಲಾಯಿತು.

ಕ್ರಿಕೆಟ್ ತಂಡಕ್ಕೆ ಟ್ರೋಫಿ ವಿತರಣೆ: ಕ್ರಿಕೆಟ್ ಪಂದ್ಯದಲ್ಲಿ 12 ತಂಡಗಳು ಭಾಗವಹಿಸಿ, ಹನುಮಾನ್ ಸೇನಾ ಪ್ರಥಮ ನವೀನ್ ತಗಡಘರ ತಂಡ ನಗದು 11 ಸಾವಿರ ಬಹುಮಾನ.  ದ್ವಿತೀಯ ಸ್ಥಾನ ಎಸ್ ಎಸ್ ಕೆ ಬಾಯ್ಸ್ ಸುನೀಲ್ ಹೌಜಿ ತಂಡಕ್ಕೆ ಟ್ರೋಫಿ 4 ಸಾವಿರ ನಗದು ನೀಡಿ ಗೌರವಿಸಲಾಯಿತು. ಬೆಸ್ಟ್ ಬಾಲರ್ ಶ್ರೀರಾಮ ಗೊಂಗಲೆ, ಬೆಸ್ಟ್ ಟ್ಯಾಟ್ಸಮೆನ್ ಸಂಜೀವ ಕಮಲಾಪುರ, ಆರ್ ರೌಂಡರ್ ತುಳಸಿ ಶ್ರೀಗಿರಿ ಅವರನ್ನು ಸನ್ಮಾನಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!