ಯಲ್ಹೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ | ಮಕ್ಕಳಿಗೆ ಹಾಲು ಕುಡಿಸಿದ ಶಿಕ್ಷಕರು
ಗುರುಮಠಕಲ್: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ನೆನಪಿಗಾಗಿ ಮತ್ತು ಮಕ್ಕಳ ಹಕ್ಕುಗಳು, ಶಿಕ್ಷಣ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ದೇಶದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಮಕ್ಕಳ ದಿನವನ್ನು ಜವಹಾರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸರ್ಕಾರಿ ಪ್ರೌಢ ಯಲ್ಹೇರಿಯಲ್ಲಿ ಆಚರಣೆ ಮಾಡಲಾಯಿತು. ಜವಾಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಮಕ್ಕಳು ಅವರನ್ನು ಪ್ರೀತಿಯಿಂದ ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು. ಮಕ್ಕಳೇ ದೇಶದ ನಿಜವಾದ ಶಕ್ತಿ ಮತ್ತು ಭವಿಷ್ಯ ಎಂಬುದು ಅವರ ದೃಢ ನಂಬಿಕೆಯಾಗಿತ್ತು ಎಂದು ಹಿರಿಯ ಶಿಕ್ಷಕ ಹುಸನಪ್ಪ ಸಕ್ರಿ ಹೇಳಿದರು.
ಇದೇ ವೇಳೆ ಶಿಕ್ಷಕರಾದ ಬಸವರಾಜ, ಶಾಂತಪ್ಪ ಯಾಳಗಿ, ಶ್ರೀದೇವಿ ಹಿರೇಮಠ, ಅನೀಲ ಕುಮಾರ ಮಾತನಾಡಿದರು. ಶಿಕ್ಷಕ ಟಿ ರಾಮುಲು ಅವರು ಸ್ವಾಗತಿಸಿ, ನಿರೂಪಿಸಿದರು. ಸರೋಜಮ್ಮ, ಸೌಭಾಗ್ಯಮ್ಮ, ಅನಂತಮ್ಮ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
